e - ಷ್ಟಪಟ್ಟವರು

:: ವರ್ಷದ ಯಾವ ದಿನದ ಇತಿಹಾಸ ಬೇಕು ಅಂತ ಆರಿಸಿ ::

ಈ ದಿನದ ಇತಿಹಾಸ - 07ನೇ ಸಪ್ಟೆಂಬರ್

ಇಂದಿನ ಇತಿಹಾಸ - 07ನೇ ಸಪ್ಟೆಂಬರ್ 




ಜಾಗತಿಕ


ಕ್ರಿ.ಶ. 1695 : ಹೆನ್ರಿ ಎವೆರಿ ಮುಂದಾಳತ್ವದ ಬ್ರಿಟಿಷ್ ಕಡಲ್ಗಳ್ಳರ ತಂಡ ಯೆಮೆನ್ ನಿಂದ ಸೂರತ್ ಗೆ ಹೊರಟಿದ್ದ ಔರಂಗಜೇಬನ ಗಂಜ್-ಎ-ಸವಾಯ್ ಹಡಗನ್ನು ವಶಪಡಿಸಿಕೊಂಡು ಅದರಿಂದ ಸುಮಾರು 500000 ಪೌಂಡ್ ಮೊತ್ತದ ಸಂಪತ್ತನ್ನು ಲೂಟಿ ಮಾಡಿತು.


1822 : Liberator of Brazil ಎಂದು ಪ್ರಖ್ಯಾತವಾಗಿರುವ Dom Pedro I ಮುಂದಾಳತ್ವದಲ್ಲಿ ಪೋರ್ತುಗಲ್ ದೇಶದಿಂದ ಬ್ರೆಜಿಲ್ ದೇಶ ಸ್ವಾತಂತ್ರ್ಯ ಪಡೆದುಕೊಂಡ ದಿನ. ಸ್ವಾತಂತ್ರ್ಯ ಪಡೆದಾಗ ಬ್ರೆಜಿಲ್ - Empire of0 Brazil ಎಂದಾಗಿತ್ತು.


1895 : ರಗ್ಬಿ ಆಟದ ಪ್ರಥಮ ಪಂದ್ಯ ಆಡಲಾಯಿತು.


1901 : Boxer Protocol ಸಹಿ ಮಾಡುವುದರೊಂದಿಗೆ ದೇಶಪ್ರೇಮಿ Boxer ಜನ ಚೀನಾ ದೇಶದ ಮೆಲೆ ವಿದೇಶೀ ಪ್ರಭಾವವನ್ನು ವಿರೋಧಿಸಿ ನಡೆಸಿದ Boxer Rebellion ಹೆಸರಿನ ಕ್ರಾಂತಿ ಮುಕ್ತಾಯಗೊಂಡಿತು.


1921 : ಅಮೆರಿಕಾದ ನ್ಯೂಜೆರ್ಸಿಯ ಅಟ್ಲಾಂಟಿಕ್ ನಗರದಲ್ಲಿ ಪ್ರಪ್ರಥಮ ಮಿಸ್ ಅಮೆರಿಕಾ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಯಿತು.


1922 : ಟರ್ಕಿ ದೇಶದ Aydin ಪ್ರಾಂತ ಗ್ರೀಕ್ ದೇಶದ ವಶದಿಂದ ಸ್ವತಂತ್ರಗೊಂಡಿತು.


1979 : Entertainment and Sports Programming Network(ESPN) ತನ್ನ ಕಾರ್ಯಕ್ರಮಗಳ ಪ್ರಸಾರ ಆರಂಭಿಸಿತು.


1986 : ದಕ್ಷಿಣ ಆಫ್ರಿಕಾದ ಡೆಸ್ಮಂಡ್ ಟುಟು ಆಂಗ್ಲಿಕನ್ ಚರ್ಚ್ ನ ಮುಖ್ಯಸ್ಥರಾದ ಪ್ರಥಮ ಕಪ್ಪು ವರ್ಣೀಯ ವ್ಯಕ್ತಿಯಾದರು.


2005 : ಈಜಿಪ್ಟ್ ದೇಶದಲ್ಲಿ ಪ್ರಪ್ರಥಮವಾಗಿ ಬಹುಪಕ್ಷಗಳು ಪಾಲ್ಗೊಂಡಿದ್ದ ಅಧ್ಯಕ್ಷೀಯ ಚುನಾವಣೆ ನಡೆಯಿತು.


2010 : ಚೀನಾದ ಕೋಸ್ಟ್ ಗಾರ್ಡ್ ಹಡಗೊಂದು ಜಪಾನ್ ದೇಶದ ಸಾಗರ ಸರಹದ್ದಿನಲ್ಲಿ ಆ ದೇಶದ ಹಡಗಿಗೆ ಢಿಕ್ಕಿ ಹೊಡೆದು, ಜಪಾನ್ ದೇಶದ ಸೈನಿಕರು ಚೀನಾ ಹಡಗಿನ ಕ್ಯಾಪ್ಟನ್ ರನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ಎರಡು ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಪ್ರಾರಂಭವಾಯಿತು..


.



ರಾಷ್ಟ್ರೀಯ


ರಾಜ್ಯ


ಕ್ರೀಡೆ



ವಿಜ್ಞಾನ


ಜನುಮದಿನ

ಈ ದಿನದ ಇತಿಹಾಸ - 06ನೇ ಸಪ್ಟೆಂಬರ್

ಇಂದಿನ ಇತಿಹಾಸ - 06ನೇ ಸಪ್ಟೆಂಬರ್ 




ಜಾಗತಿಕ




ಕ್ರಿ.ಶ. 1522 : ಫರ್ಡಿನೆಂಡ್ ಮೆಗಲನ್ ನ ಹಡಗು ವಿಕ್ಟೋರಿಯಾ ವಿಶ್ವ ಪರ್ಯಟನೆ ಮುಗಿ ಮರಳಿ ಸ್ಪೇನ್ ತಲುಪಿತು. ತನ್ಮೂಲಕ ವಿಶ್ವ ಪರ್ಯಟನೆ ಮಾಡಿದ ಮೊದಲ ಹಡಗು ಅದಾಯಿತು.


1885 : ಪೂರ್ವ ರುಮೇಲಿಯಾ ಬಲ್ಗೇರಿಯಾದೊಂದಿಗೆ ವಿಲೀನವಾಯಿತು.


1930 : ಅರ್ಜೆಂಟೀನಾ ಅಧ್ಯಕ್ಷರ ವಿರುದ್ಧ ಮಿಲಿಟರಿ ದಂಗೆ.


1949 : ಎರಡನೇ ಮಹಾಯುದ್ಧದಲ್ಲಿ ಜರ್ಮನಿಯಿಂದ ವಶಪಡಿಸಿಕೊಂಡಿದ್ದ ಸಂಪತ್ತನ್ನು ಮಿತ್ರ ರಾಷ್ಟ್ರಗಳು ಜರ್ಮನಿಗೆ ಹಸ್ತಾಂತರಿಸಿದವು.


1952 : ಕೆನಡಾದ ಪ್ರಥಮ ದೂರದರ್ಶನ ಕೇಂದ್ರ CBFT TV ( Canadian Broadcasting Corporation Français Télévision ) ಪ್ರಾರಂಭವಾಯಿತು.


1955 : Istambul Pogrom ಎಂದೇ ಕುಖ್ಯಾತವಾಗಿರುವ ಸರ್ಕಾರದ ಕುಮ್ಮಕ್ಕಿನೊಂದಿಗೆ ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ನೆಲಿಸಿದ ಗ್ರೀಕ್ ಮತ್ತ ಅರ್ಮೇನಿಯನ್ನರ ಮೇಲೆ ದೌರ್ಜನ್ಯವೆಸಗಲಾಯಿತು.


1965 : Operation GrandSlam ಹೆಸರಿನಲ್ಲಿ ಪ್ರಾರಂಭವಾದ ಭಾರತ-ಪಾಕ್ ಯುದ್ಧ. ಪಾಕಿಸ್ತಾನಕ್ಕೆ ಸರಿಯಾದ ಪ್ರತ್ಯುತ್ತರ ನೀಡಿದ ಭಾರತ ದೇಶ ಕೊನೆಗೆ ತಾಷ್ಕೆಂಟ್ ಒಪ್ಪಂದದೊಂದಿಗೆ ಕದನಕ್ಕೆ ಮುಕ್ತಾಯ ಹಾಡಿತು.


1968 : ಸ್ವಾಝಿಲ್ಯಾಂಡ್ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು.


1972 : ಮ್ಯೂನಿಕ್ ಒಲಿಂಪಿಕ್ ಕ್ರೀಡಾಕೂಟದಲ್ಲಿ 09 ಜನ ಇಸ್ರೇಲೀ ಕ್ರೀಡಾಪಟುಗಳನ್ನು ಅಪಹರಿಸಿ ಹತ್ಯೆಗಯ್ಯಲಾಯಿತು. Black September Group ಎಂಬ ಪ್ಯಾಲಿಸ್ತೇನೀ ತಂಡದಿಂದ ನಡೆದ ಈ ಹತ್ಯಾಕಾಂಡ Munich Massacre ಎಂಬ ಹೆಸರಿನಿಂದ ಕುಖ್ಯಾತವಾಗಿದೆ.


1991 :
  • ಬಾಲ್ಟಿಕ್ ಸಮುದ್ರದ ಪ್ರದೇಶದಲ್ಲಿರುವ ಲಾತ್ವಿಯಾ : ಲಿಥುಯೇನಿಯಾ : ಎಸ್ಟೋನಿಯಾ(Baltic States) ದೇಶಗಳ ಸ್ವಾತಂತ್ರ್ಯವನ್ನು ಸೋವಿಯತ್ ಒಕ್ಕೂಟ ಮಾನ್ಯತೆ ನೀಡಿತು. ಆದರೆ ಈ ದೇಶಗಳು ಮೊದಲ ಮಹಾಯುದ್ಧದ ನಂತರ 1918ರಲ್ಲೇ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದವು.
  • ರಷಿಯಾದ ಎರಡನೇ ಅತಿ ದೊಡ್ಡ ನಗರವಾದ ಸೇಂಟ್ ಪೀಟರ್ಸ್ ಬರ್ಗ್ ಗೆ 1924 ರಲ್ಲಿ ಲೆನಿನ್ ಗಾರ್ಡ್ ಎಂದು ಬದಲಾಯಿಸಿದ್ದ ಹೆಸರನ್ನು ಮರಳಿ ಸೇಂಟ್ ಪೀಟರ್ಸ್ ಬರ್ಗ್ ಎಂದೇ ನಾಮಕರಣ ಮಾಡಲಾಯಿತು.


1997 : ರಸ್ತೆ ಅಪಘಾತದಲ್ಲಿ ಮಡಿದ ವೇಲ್ಸ್ ದೇಶದ ರಾಜಕುಮಾರಿ ಡಯಾನಾಳ ಅಂತ್ಯಕ್ರಿಯೆ ಜರುಗಿತು.





.
ರಾಷ್ಟ್ರೀಯ


ರಾಜ್ಯ

ಕ್ರೀಡೆ

ವಿಜ್ಞಾನ   ಜನುಮದಿನ



 

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಇಲ್ಲಿ ಬರೆಯಿರಿ