e - ಷ್ಟಪಟ್ಟವರು

:: ವರ್ಷದ ಯಾವ ದಿನದ ಇತಿಹಾಸ ಬೇಕು ಅಂತ ಆರಿಸಿ ::

ಈ ದಿನದ ಇತಿಹಾಸ : 01ನೇ ಜನವರಿ



ಇಂದಿನ ಇತಿಹಾಸ - 01ನೇ ಜನವರಿ 




ಜಾಗತಿಕ




ಕ್ರಿ.ಪೂ. 45 : ಜೂಲಿಯನ್ ಕ್ಯಾಲೆಂಡರ್ ಜಾರಿಗೆ ಬಂತು

ಕ್ರಿ.ಶ. 1 : ಕ್ರಿಸ್ತ ಶಕ ಪ್ರಾರಂಭ 

630 : ಸೈನ್ಯದೊಂದಿಗೆ ಮೆಕ್ಕಾ ಕಡೆ ಸಾಗಿದ ಮಹಮ್ಮದ್ ಪೈಗಂಬರರು ( ಮುಂದೆ ರಕ್ತಪಾತವಿಲ್ಲದೇ ಮೆಕ್ಕಾ ವಶವಾಯಿತು )

990 : ರಷಿಯಾ ಜೂಲಿಯನ್ ಕ್ಯಾಲೆಂಡರ್ ಅಂಗೀಕರಿಸಿತು.

1993
  • ಝೋಕೋಸ್ಲೋವಾಕಿಯಾ, ಝೆಕ್ ಗಣರಾಜ್ಯ & ಸ್ಲೋವಾಕಿಯಾ ಎಂದು ಇಬ್ಭಾಗವಾಯಿತು.

1994
  • ಮೈಕ್ರೋಸಾಫ್ಟ್ ಸಂಸ್ಥಾಪಕ ಅಧ್ಯಕ್ಷ ಬಿಲ್ ಗೇಟ್ಸ್ (38) ಜೊತೆ ಮೆಲಿಂಡಾ ಫ್ರೆಂಚ್ (29) ವಿವಾಹ.
  • Noarth Atlantic Free Trade Agreement ( NAFTA ) ಜಾರಿಗೆ ಬಂತು.

1995 : ಆಸ್ಟ್ರಿಯಾ, ಫಿನ್ ಲ್ಯಾಂಡ್ & ಸ್ವೀಡನ್ ಯುರೋಪಿಯನ್ ಒಕ್ಕೂಟ ಸೇರಿದವು.


1997 : ಝೈರೇ ಹೆಸರಿನಡಿಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆ ಸೇರಿದ ಝೈರೇ ಗಣರಾಜ್ಯ.

1998 : ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಸ್ಥಾಪನೆ

1999 :  ಯೂರೋ ನಾಣ್ಯ ಚಲಾವಣೆಗೆ

2000 : ನ್ಯೂಝಿಲ್ಯಾಂಡ್ ದೇಶದ ಜಿಸ್ ಬೌರ್ನ ( Gisbourne ) ನಗರ, ಈ ಸಹಸ್ರಮಾನವನ್ನ ಸ್ವಾಗತಿಸಿದ ಜಗತ್ತಿನ ಮೊದಲ ನಗರವಾಯಿತು.

2002
  • 1992ರಲ್ಲೇ ಸಹಿ ಹಾಕಲಾದ Open Skies Mutual Surveillance Treaty ಜಾರಿಗೆ ಬಂತು. ( 34 ದೇಶಗಳು ಸಹಿ ಹಾಕಿವೆ ) ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
  • ಯುರೋ ಬ್ಯಾಂಕ್ ನೋಟು & ನಾಣ್ಯಗಳು ಯುರೋಪಿಯನ್ ಒಕ್ಕೂಟಕ್ಕೆ ಸೇರಿದ 12 ದೇಶಗಳಲ್ಲಿ ಏಕರೂಪದ ನಾಣ್ಯ ಚಲಾವಣೆ ಸಲುವಾಗಿ ಜಾರಿಗೆ ಬಂತು.
  • ಚೈನೀಸ್ ತೈಪೇಯಿ ಹೆಸರಲ್ಲಿ ವಿಶ್ವ ವ್ಯಾಪಾರ ಸಂಘಟನೆ ( WTO ) ಸೇರಿದ ತೈವಾನ್ ದೇಶ.
2007
  • ಬಲ್ಗೇರಿಯಾ & ರೊಮಾನಿಯಾ ದೇಶಗಳು ವಿದ್ಯುಕ್ತವಾಗಿ ಯುರೋಪಿನ್ ಯೂನಿಯನ್ ಸೇರಿಕೊಂಡವು. 
  • ಬಲ್ಗೇರಿಯನ್, ರೊಮಾನಿಯನ್ & ಐರಿಶ್ ಭಾಷೆಗಳು ಯುರೋಪಿನ್ ಒಕ್ಕೂಟದ ಮಾನ್ಯತೆ ಪಡೆದು ಅಧಿಕೃತ ಭಾಷೆಗಳ ಪಟ್ಟಿಗೆ ಸೇರಿಕೊಂಡವು.
  • ಯುರೋ ನಾಣ್ಯವನ್ನ ಅಂಗೀಕರಿಸಿದ ಸ್ಲೋವೇನಿಯಾ. ಇದರೊಂದಿಗೆ ಹೀಗೆ ಅಂಗೀಕರಿಸಿದ 13ನೇ ಯುರೋಪಿನ ದೇಶವಾಯಿತು.
2008 : ಯುರೋ ನಾಣ್ಯವನ್ನ ಅಂಗೀಕರಿಸಿದ ಮಾಲ್ಟಾ & ಸಿಪ್ರಸ್. ಇದರೊಂದಿಗೆ  ಹೀಗೆ ಅಂಗೀಕರಿಸಿದ ಕ್ರಮವಾಗಿ 14 & 15 ನೇ ಯುರೋಪಿನ ದೇಶಗಳಾದವು.

2009 : ಯುರೋ ನಾಣ್ಯವನ್ನ ಅಂಗೀಕರಿಸಿದ ಸ್ಲೋವಾಕಿಯಾ. ಇದರೊಂದಿಗೆ ಹೀಗೆ ಅಂಗೀಕರಿಸಿದ 16ನೇ ಯುರೋಪಿನ ದೇಶವಾಯಿತು.


ರಾಷ್ಟ್ರೀಯ


ರಾಜ್ಯ


ಕ್ರೀಡೆ


ವಿಜ್ಞಾನ


ಜನುಮದಿನ



ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಇಲ್ಲಿ ಬರೆಯಿರಿ